ಬೆಂಗಳೂರು : ನಗರದ ಬೆಳ್ಳಂದೂರಿನ ಆರ್ ಎಂಜಿ ಇಕೋ ಸ್ಪೇಸ್ ಟೆಕ್ ಪಾರ್ಕ್ ನಲ್ಲಿ ಜೀ ಸಂಸ್ಥೆಯ ತಂತ್ರಜ್ಞಾನ ಮತ್ತು ಇನ್ನೋವೇಶನ್ ಕೇಂದ್ರವನ್ನ ಕರ್ನಾಟಕ ರಾಜ್ಯಪಾಲ ಥಾವರ್ ಚಂದ ಗೆಲ್ಹೋಟ್ ಉದ್ಘಾಟಿಸಿ ಜೀ ಕುಟುಂಬಕ್ಕೆ ಅಭಿನಂದನೆ ತಿಳಿಸಿದರು.


COMMERCIAL BREAK
SCROLL TO CONTINUE READING

ಕಚೇರಿ ಭೇಟಿ ನೀಡಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ ಗೆಲ್ಹೋಟ್, ಇಡೀ ಜಗತ್ತಿಗೆ ಭಾರತದ ಪ್ರಾಭಲ್ಯದ ಪರಿಚಯ ಆಗಿದೆ. ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಿಂದ ಜನ ಸಾಮಾನ್ಯರಿಗೆ, ಮನರೆಂಜನೆ ಹಾಗೂ ಮಾಹಿತಿ ಸುಲಭವಾಗಿ ಕೈಗೆಟಕುವಂತಾಗಿದೆ. ಇದಲ್ಲದೆ Augmented Reality, ಎಲ್ಲರ ಗಮನ ಸೆಳೆದಿದೆ, ಮನರೆಂಜನೆಯಲ್ಲಿ ವಿಜ್ಞಾನ ಬಳಕೆ ಉತ್ತುಂಗ ತಲುಪುತ್ತಿದೆ. ಇದೇ ಹಾದಿಯಲ್ಲಿ ಕರ್ನಾಟಕ ಕೂಡ ಹಿಂದಿಲ್ಲ, ಐಐಎಸ್ ಸಿ ಸೇರಿದಂತೆ ಅನೇಕ ಉತ್ಕೃಷ್ಟ ಕೇಂದ್ರಗಳು ಸಮಾಜಕ್ಕೆ ಕೊಡುಗೆಗಳನ್ನ ನೀಡುತ್ತಿದೆ, ಎಂದು ಹೇಳಿದರು.


ಇದನ್ನೂ ಓದಿ : ಬಿರು ಬೇಸಿಗೆಯಲ್ಲಿ ಕಾರಿನ ಎಸಿ ಕೈ ಕೊಟ್ರೆ.. ಈ 8 ಟ್ರಿಕ್ಸ್‌ ಬಳಸಿ ಕೂಲ್‌ ಆಗಿ


ಇದೇ ಸಂದರ್ಭದಲ್ಲಿ ಮಾತನ್ನಾಡಿದ ಜೀ ಸಂಸ್ಥೆಯ ಜೀ ಅಂತಾರಾಷ್ಟ್ರೀಯ ಬ್ರಾಡ್ ಕಾಸ್ಟ್ ಸಂಸ್ಥೆಯ ಮುಖ್ಯ ಕಾರ್ಯಾವಾಹ ಅಮಿತ್ ಗೋಯೆಂಕ , ವಿಜ್ಞಾನದ ಬಳಕೆಯಿಂದ ಈ ಸಂಸ್ಥೆಯು ಎಲ್ಲರ ಅಪೇಕ್ಷೆ ತಲುತ್ತದೆ. ಜೊತೆಗೆ ದೇಶದ ಮೀಡಿಯಾ ಹಾಗೂ ಮನರಂಜನೆ ಮಾಧ್ಯಮದ ಹೊಸ ಚರಿತ್ರೆ ಸೃಷ್ಟಿಸಲಿದೆ ಎಂದು ಸಂಸ್ಥೆಯ ಗುರಿಯನ್ನು ಪ್ರತಿಪಾದಿಸಿದರು.


ನೂತನವಾಗಿ ಉದ್ಘಾಟನೆಯಾದ ಕಚೇರಿಯ ಸಿಬ್ಬಂದಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಇದನ್ನೂ ಓದಿ : Flipkart Turbo Carnival Sale: ಕೇವಲ 1500 ರೂಪಾಯಿಗೆ ಖರೀದಿಸಿ, Vivo 5G ಸ್ಮಾರ್ಟ್‌ಫೋನ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.